ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಕಿಡ್ನಾಪ್ ಆಗಿದ್ದ ಯೋಧ ಶವವಾಗಿ ಪತ್ತೆ

ಪರಿವರ್ತನ ಪ್ರಭಾ:
ಜಮ್ಮು-ಕಾಶ್ಮೀರದ (Jammu Kashmir) ಅನಂತ್​ನಾಗ್ (AnantNag) ಜಿಲ್ಲೆಯಲ್ಲಿ ಉಗ್ರರಿಂದ (Terrorists) ಅಪಹರಣಕ್ಕೊಳಗಾಗಿದ್ದ (Kidnap) ಸೇನಾ ಯೋಧರೊಬ್ಬರ (Jawan) ಮೃತದೇಹ (Corpse) ಪತ್ತೆಯಾಗಿದ್ದು, ದೇಹದಲ್ಲಿ ಹಲವು ಗುಂಡಿನ (Bullet) ಗುರುತುಗಳಿವೆ.
ಮೃತರನ್ನು ಹಿಲಾಲ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಪ್ರಾದೇಶಿಕ ಸೇನೆಯ (Territorial Army) ಯೋಧರನ್ನು ಉಗ್ರರು (Terrorists) ಅಕ್ಟೋಬರ್​ 08ರಂದು ಅಪಹರಿಸಿದ್ದರು. ಓರ್ವ ಯೋಧ ಉಗ್ರರ ಕಣ್ತಪ್ಪಿಸಿ ಎಸ್ಕೇಪ್​ ಆಗಿದ್ದರು. ಇನ್ನೋರ್ವ ಯೋಧನಿಗಾಗಿ ಶೋಧ ಕಾರ್ಯ ನಡೆಸಿದ್ದ ಭದ್ರತಾ ಪಡೆಗಳಿಗೆ ಇದೀಗ ಅವರ ಮೃತದೇಹ ಸಿಕ್ಕಿದೆ.

ಈ ಕುರಿತು ಮಾತನಾಡಿರುವ ಸೇನೆಯ ಹಿರಿಯ ಅಧಿಕಾರಿಯೊಬ್ಬರು, ಅಕ್ಟೋಬರ್ 8 ರಂದು ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆರಂಭಿಸಿದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಟೆರಿಟೋರಿಯಲ್ ಆರ್ಮಿಯ 161 ಯೂನಿಟ್‌ಗೆ ಸೇರಿದ ಇಬ್ಬರು ಸೈನಿಕರನ್ನು ಅನಂತನಾಗ್‌ನ ಅರಣ್ಯ ಪ್ರದೇಶದಿಂದ ಉಗ್ರರು ಅಪಹರಿಸಿದ್ದರು.
ಈ ವೇಳೆ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿಯಾಗಿದ್ದು, ಒಬ್ಬರು ಎರಡು ಗುಂಡಿನ ಗಾಯಗಳ ನಂತರವೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೋರ್ವ ಯೋಧನ ಮೃತದೇಹವು ಅಕ್ಟೋಬರ್​ 09ರಂದು ಅನಂತನಾಗ್‌ನ ಪತ್ರಿಬಲ್ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಅವರ ದೇಹದ ಮೇಲೆ ಗುಂಡಿನ ಗಾಯಗಳಾಗಿರುವುದು ಕಂಡು ಬಂದಿದೆ. ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *