ತಾರಕಕ್ಕೇರಿದ ಜೆಡಿಎಸ್-ಕಾಂಗ್ರೆಸ್ ಪೋಸ್ಟ್ ವಾರ್! ಡಿಕೆಶಿ ರಾತ್ರಿ ಕಾರ್ಯಾಚರಣೆ ಬಗ್ಗೆ ಜೆಡಿಎಸ್ ಕಟು ಟೀಕೆ!

ಪರಿವರ್ತನಾ ಪ್ರಭಾ:

ಜೆಡಿಎಸ್ ಮತ್ತು ಕಾಂಗ್ರೆಸ್ (JDS & Congress)ನಡುವ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ಪೋಸ್ಟ್ ಹಾಕಿ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಗೆ ಜೆಡಿಎಸ್ ಮತ್ತೊಂದು ಪೋಸ್ಟ್ ಮೂಲಕ ಕೌಂಟರ್ ನೀಡಿದೆ.

ಡಿಸಿಎಂ ಡಿಕೆ ಶಿವಕುಮಾರ್ (Dcm Dk shivakumar) ವಿರುದ್ಧ ಕಿಡಿ ಕಾರಿರುವ ಜೆಡಿಎಸ್, ಡಿಕೆಶಿ ವಿರುದ್ಧ ಕಟು ಟೀಕೆ ಮಾಡಿದೆ.ಈಗಲೂ ಕಲೆಕ್ಷನ್‌ ಗಿರಾಕಿ, ಆ ಶಿಖಂಡಿ, ನಪುಂಸಕ, ರಣಹೇಡಿ, ಮಾನಗೇಡಿಯನ್ನು ಸಮರ್ಥಿಸಿಕೊಳ್ಳುತ್ತೀರಾ ? ನಿಮಗೆ ನಾಚಿಕೆಯಾಗಲ್ವಾ..? ಎಂದು ಕಾಂಗ್ರೆಸಿಗರನ್ನ ಪ್ರಶ್ನೆ ಮಾಡಿದೆ.
ಕೇವಲ ರಾತ್ರಿ ಕಾರ್ಯಾಚರಣೆ ಮಾಡುವ ಅಧ್ಯಕ್ಷನ ಬಗ್ಗೆ ಕೆಪಿಸಿಸಿ (KPCC) ಕಛೇರಿಯ ಪಡಸಾಲೆಯಲ್ಲೇ ಪ್ರತಿನಿತ್ಯ ಬಿಸಿ ಬಿಸಿ ಚರ್ಚೆ ನಡೆಯುತ್ತವೆ. ಕಾಂಗ್ರೆಸ್‌ ಹಿರಿಯ ನಾಯಕರು ಹೇಳುವಂತೆ ರೌಡಿ ಕೊತ್ವಾಲನ ಶಿಷ್ಯ, ಹಾಲಿ ಅಧ್ಯಕ್ಷನ ಹಣ ಸಂಪಾದನೆಯ (BF-VCR) ಅಡ್ಡದಾರಿಯ ಗುಟ್ಟು ಇಡೀ ರಾಜ್ಯಕ್ಕೆ ಗೊತ್ತಿದೆ.
ನಿಮ್ಮ ಅಧ್ಯಕ್ಷ ತಿಹಾರ್‌ ಜೈಲುಹಕ್ಕಿ, ಸಿಡಿ ಶಿವು, ಗ್ರಾನೈಟ್‌-ಹವಾಲಾ ದಂಧೆಕೋರನ ಪೌರುಷದ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಬೇರೆ ಕೇಡು.. ಎಂಥಹ ಭಂಡಬಾಳು ! ಥೂ ಅಸಹ್ಯ.. !! ಎಂದು ಕುಮಾರಸ್ವಾಮಿಯನ್ನು ಟೀಕಿಸಿದ್ದ ಕಾಂಗ್ರೆಸ್ ಗೆ ಕಟು ಶಬ್ದಗಳಲ್ಲಿ ತಿರುಗೇಟು ನೀಡಿದೆ.

0 thoughts on “ತಾರಕಕ್ಕೇರಿದ ಜೆಡಿಎಸ್-ಕಾಂಗ್ರೆಸ್ ಪೋಸ್ಟ್ ವಾರ್! ಡಿಕೆಶಿ ರಾತ್ರಿ ಕಾರ್ಯಾಚರಣೆ ಬಗ್ಗೆ ಜೆಡಿಎಸ್ ಕಟು ಟೀಕೆ!

  1. I just could not depart your site before suggesting that I extremely enjoyed the standard information a person provide for your visitors? Is going to be back often in order to check up on new posts

Leave a Reply

Your email address will not be published. Required fields are marked *