ಕರ್ನಾಟಕದಲ್ಲಿ ಹಬ್ಬಕ್ಕೆ ವಿಶೇಷ ರೈಲುಗಳ ಸೇವೆ, ಪ್ರಯಾಣಿಕರ ಗಮನಕ್ಕೆ

ಪರಿವರ್ತನ ಪ್ರಭಾ:
ಕರ್ನಾಟಕದ ರಾಜ್ಯಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಪ್ರಯುಕ್ತ ಊರಿಂದ ಊರಿಗೆ ತೆಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ದಟ್ಟಣೆ ಕಂಡು ಬರಲಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ವಲಯವು ಹೆಚ್ಚುವರಿ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ನಾಳೆ ಅಕ್ಟೋಬರ್ 10ರಿಂದ ವಿವಿಧ ದಿನಗಳಲ್ಲಿ ಈ ರೈಲುಗಳ ಸೇವೆಗೆ ಲಭ್ಯವಾಗಲಿವೆ.

ದಸರ ಹಬ್ಬದ ಈ ವಿಶೇಷ ರೈಲುಗಳು ಹುಬ್ಬಳ್ಳಿ, ಮೈಸೂರು, ಬೆಂಗಳುರು, ಬೆಳಗಾವಿ ಸೇರಿದಂತೆ ವಿವಿದ ರೈಲು ನಿಲ್ದಾಣಗಳಿಂದ ಸಂಚರಿಸಲಿವೆ. ಈ ರೈಲುಗಳ ಸಮಯ, ನಿಲ್ದಾಣ, ನಿಲುಗಡೆ ಮತ್ತು ಮಾರ್ಗ ಸೇರಿದಂತೆ ಪೂರ್ಣ ವೇಳಾಪಟ್ಟಿ ಮಾಹಿತಿ ಇಲ್ಲಿದೆ.

* ಎಸ್‌ಎಸ್‌ಎಸ್ ಹುಬ್ಬಳ್ಳಿ-ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 07305) ಅಕ್ಟೋಬರ್ 10 ರಂದು ಹುಬ್ಬಳ್ಳಿಯಿಂದ ಬೆಳಗ್ಗೆ 11:30 ಗಂಟೆಗೆ ಹೊರಡುತ್ತದೆ. ಅದೇ ದಿನ ಬೆಂಗಳೂರಿನ ಯಶವಂತಪುರ ರಾತ್ರಿ 19:40 ಗಂಟೆಗೆ ಆಗಮಿಸಲಿದೆ.

ಹುಬ್ಬಳ್ಳಿಯಿಂದ ಹಾವೇರಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತ ಸಾಗಿ ಬರಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನಿಡಲಾಗಿದೆ.

* ಯಶವಂತಪುರ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 07306) ನಾಳೆ ಯಶವಂತಪುರದಿಂದ ರಾತ್ರಿ 20:55 ಗಂಟೆಗೆ ಸಂಚಾರ ಆರಂಭಿಸಿ ಮರುದಿನ ಬೆಳಗಾವಿ ನಿಲ್ದಾಣಕ್ಕೆ ಬೆಳಗ್ಗೆ 08:15 ಗಂಟೆಗೆ ಬರುತ್ತದೆ.

ಯಶವಂತಪುರದಿಂದ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನೂರು, ಹಾವೇರಿ, ಎಸ್‌ಎಸ್‌ಎಸ್‌ಎಸ್ ಹುಬ್ಬಳ್ಳಿ ಧಾರವಾಡ, ಅಲ್ಲಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ಮಾರ್ಗದ ಪ್ರಯಾಣಿಕರಿಗೆ ಆರಾಮದಾಯಕ ಸೇವೆ ಸಿಗಲಿದೆ.

* ಬೆಳಗಾವಿ-ಮೈಸೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 07307/07308) ನಾಡಿದ್ದು ಅಕ್ಟೋಬರ್ 11ರಂದು ಬೆಳಗಾವಿಯಿಂದ ಸೇವೆ ಆರಂಭಿಸಲಿದೆ. ಸಂಜೆ 17:30 ಗಂಟೆಗೆ ಹೊರಟು ಮಾರನೇ ದಿನ ಬೆಳಗ್ಗೆ06:25 ಗಂಟೆಗೆ ಅರಮನೆ ನಗರಿ ಮೈಸೂರು ತಲುಪಲಿದೆ.

ಈ ರೈಲು ಖಾನಾಪುರ, ಲೋಂಡಾ, ಅಳ್ತಾವರ, ಧಾರವಾಡ, ಎಸ್‌ಎಸ್‌ಎಸ್‌ಎಸ್ ಹುಬ್ಬಳ್ಳಿ ಹಾವೇರಿ, ರಾಣಿಬೆನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ಹಾಸನ, ಹೊಳೆ ನರಸೀಪುರ ಮತ್ತು ಕೃಷ್ಣರಾಜನಗರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

* ಮರಳಿ ಇದೇ ಮೈಸೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 07308) ಅಕ್ಟೋಬರ್ 12ರಂಉದ ಮೈಸೂರು ನಿಲ್ದಾಣದಿಂದ ರಾತ್ರಿ 22:30 ಗಂಟೆಗೆ ಪ್ರಯಾಣ ಆರಂಭಿಸಿ ಮರುದಿನ ಬೆಳಗ್ಗೆ 7 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಸೇರಲಿದೆ.

ಮೈಸೂರಿನಿಂದ ಹೊರುಡವ ರೈಲು ಮೊದಲು ಕೃಷ್ಣರಾಜನಗರ, ಹೊಳೆ ನರಸೀಪುರ ನಂತರ ಹಾಸನ, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನೂರು ಮತ್ತು ಹಾವೇರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಇದರಲ್ಲಿ ಎಸಿ, ನಾನ್ ಎಸಿ, ಜನರಲ್ಲಿ ಸೇರಿ ಒಟ್ಟು 16 ಬೋಗಿಗಳು ಇರಲಿವೆ.

* ಮೈಸೂರು-ಕೆಎಸ್‌ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ರೈಲು (ಸಂಖ್ಯೆ 06279/06280) ಅಕ್ಟೋಬರ್ 9, 10, 11, 12 ಮತ್ತು 13ರವರೆಗೆ ಸೇವೆ ನೀಡಲಿದೆ. ಈ ರೈಲು ಮೈಸೂರಿನಿಂದ ರಾತ್ರಿ 23:15 ಪ್ರಯಾಣ ಆರಂಭಿಸಿ, ಬೆಳಗಿನ ಜಾವ 2:30 ಗಂಟೆಗೆ ಬೆಂಗಳೂರಿಗೆ ಬಂದು ಸೇರಿಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮರಳಿ ಇದೇ ವಿಶೇಷ ರೈಲು (ಸಂಖ್ಯೆ 06280) ಅಕ್ಟೋಬರ್ 10, 11, 12, 13 ಮತ್ತು 14ರಂದು ಕೆಎಸ್‌ಆರ್ ಬೆಂಗಳೂರಿನಿಂದ ಬೆಳಗಿನ ಜಾವ 3 ಗಂಟೆಗೆ ಹೊರಟು ಅದೇ ದಿನ ಬೆಳ್ಳಬೆಳಗ್ಗೆ ಮೈಸೂರಿಗೆ 06:15 ಗಂಟೆಗೆ ಮೈಸೂರು ತಲುಪಲಿದೆ. 21 ಬೋಗಿಗಳ ಈ ರೈಲು ನಿಗದಿತ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ನೀಡಲಿದೆ.

* ಮೈಸೂರು-ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು (ಸಂಖ್ಯೆ 06281/06282) ಅಕ್ಟೋಬರ್ 9, 10, 11, 12 ಮತ್ತು 13 ರಂದು ಮೈಸೂರಿನಿಂದ ರಾತ್ರಿ 23:30 ಗಂಟೆಗೆ ಬಿಡುತ್ತದೆ. ಮರುದಿನ ಮರುದಿನ ಮಧ್ಯಾಹ್ನ 01:30ಕ್ಕೆ ಚಾಮರಾಜನಗರ ತಲುಪುತ್ತದೆ.

ಮರಳಿ ಇದೇ ಚಾಮರಾಜನಗರ ದಿಂದ ರೈಲು (ಸಂಖ್ಯೆ 06282) ಅಕ್ಟೋಬರ್ 10, 11, 12, 13 ಮತ್ತು 14 ರಂದು ಬೆಳಗ್ಗೆ 04:15 ಗಂಟೆಗೆ ಹೊರಟು ಅದೇ ದಿನ ಸಂಜೆ 06:00 ಗಂಟೆಗೆ ಮುಟ್ಟಲಿದೆ ಎಂದು ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *