ಅಕ್ರಮ ಮದ್ಯ ಸೇವಿಸಿ ಮತ್ತೆ 10 ಮಂದಿ ಬಲಿ, ಬಿಹಾರದಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿಕೆ

ಪರಿವರ್ತನ್ ಪ್ರಭ:

ಬಿಹಾರದ ಸಿವಾನ್ ಮತ್ತು ಸರನ್ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಸೇವಿಸಿ ಮತ್ತೆ ಹತ್ತು ಮಂದಿ ಸಾವನ್ನಪ್ಪಿದ್ದು, ಹೂಚ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಸಿವಾನ್ ನಲ್ಲಿ 28 ಮಂದಿ ಮತ್ತು ಸರನ್‌ನಿಂದ ಏಳು ಸಾವುಗಳು ವರದಿಯಾಗಿವೆ ಎಂದು ಸರನ್ ರೇಂಜ್ ಪೊಲೀಸ್ ಉಪ ಇನ್ಸ್‌ಪೆಕ್ಟರ್ ಜನರಲ್(ಡಿಐಜಿ) ನೀಲೇಶ್ ಕುಮಾರ್ ಅವರು ಹೇಳಿದ್ದಾರೆ.

“ಸಿವಾನ್ ಜಿಲ್ಲೆಯ ಮಘರ್ ಮತ್ತು ಔರಿಯಾ ಪಂಚಾಯತ್‌ಗಳಲ್ಲಿ ಇದುವರೆಗೆ 28 ​​ಜನರು ಶಂಕಿತ ಅಕ್ರಮ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ.

ಸರನ್ ಜಿಲ್ಲೆಯ ಮಶ್ರಖ್ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ರಾಹಿಂಪುರ ಪ್ರದೇಶದಲ್ಲಿ ಏಳು ಮಂದಿ ಶಂಕಿತ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಡಿಐಜಿ ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ನಿತೀಶ್ ಕುಮಾರ್ ಸರ್ಕಾರ, ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಸೇವನೆ ಮೇಲೆ ನಿಷೇಧ ಹೇರಿದ ಪರಿಣಾಮ ಹೂಚ್ ದುರಂತಗಳು ಹೆಚ್ಚುತ್ತಿವೆ ಎಂದು ಆರೋಪಿಸಲಾಗಿದೆ.

ಎರಡೂ ಜಿಲ್ಲೆಗಳಲ್ಲಿ ಜನರು ಅಕ್ರಮ ಮದ್ಯ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸಿವಾನ್, ಸರನ್ ಮತ್ತು ಪಾಟ್ನಾ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ 25 ಕ್ಕೂ ಹೆಚ್ಚು ಜನರು ಇನ್ನೂ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *