ವರಿಷ್ಟರ ಮಾಹಿತಿಯಂತೆ ಚನ್ನಪಟ್ಟಣ ಟಿಕೆಟ್ ನನಗೆ ಸಿಗುತ್ತೆ : ಎಂಎಲ್ಸಿ ಸಿಪಿ ಯೋಗೇಶ್ವರ್

ಪರಿವರ್ತನ್ ಪ್ರಭ:

ರಾಜ್ಯದ ಮೂರು ಉಪಚುನಾವಣೆಗಳ ದಿನಾಂಕ ನಿನ್ನೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಪ್ರಬಲವಾದ ಕ್ಷೇತ್ರವಾಗಿದೆ. ಏಕೆಂದರೆ Hd ಕುಮಾರಸ್ವಾಮಿ ಹಾಗೂ ಡಿಕೆ ಬ್ರದರ್ಸ್ ಅವರ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಹಾಗಾಗಿ ಒಂದು ಉಪಚುನಾವಣೆ ಬಹಳ ಕುತೂಹಲಕಾರಿ ಆಗಿದೆ.

ಅಲ್ಲದೆ ವರಿಷ್ಠ ಮಾಹಿತಿಯ ಪ್ರಕಾರ ಚನ್ನಪಟ್ಟಣ ಟಿಕೆಟ್ ನನಗೆ ಸಿಗುತ್ತದೆ ಎಂದು ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿಪಿ ಯೋಗೇಶ್ವರ್ ಅವರು, ವರಿಷ್ಟರ ಮಾಹಿತಿ ಪ್ರಕಾರ ನನಗೆ ಚನ್ನಪಟ್ಟಣ ಟಿಕೇಟ್ ಸಿಗುತ್ತದೆ. ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಎಂಎಲ್ಸಿ ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದರು.

ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದೆ. ನನ್ನನ್ನು ಜನರು ಪಕ್ಷಾಂತರ ಅಂತ ಕರೆಯುತ್ತಾರೆ. ಆದರೆ ನಾನು ಪಕ್ಷಾಂತರ ಮಾಡಿದ್ದು ತಾಲೂಕಿನ ಅಭಿವೃದ್ಧಿಗಾಗಿ. ರಾಷ್ಟ್ರ ರಾಜಕಾರಣಕ್ಕೆ ನರೇಂದ್ರ ಮೋದಿ ಅವರೇ ಬಂದಿರಲಿಲ್ಲ. ಆಗಲೇ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಡಿಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಇಬ್ಬರ ನಡುವೆ ಸೋಲು ಕಂಡಿದ್ದೇನೆ. ಆದರೆ ಈಗ ನಮ್ಮ ಪಕ್ಷ ಸದೃಢವಾಗಿದೆ.

ಈಗ ಚುನಾವಣೆ ಬಂದಿದೆ ಜನ ಮತ್ತೆ ನನ್ನನ್ನು ಶಾಸಕನನ್ನಾಗಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ರಾಜಕೀಯ ಪಕ್ಷಗಳಿಂದ ತೊಂದರೆ ಬಂದಾಗ ಜನರು ಕಾಪಾಡಿದ್ದಾರೆ. ಬಿಜೆಪಿ ಮುಖಂಡರು ಕಾರ್ಯಕರ್ತರು ನನ್ನ ಹೆಸರು ಹೇಳುತ್ತಿದ್ದಾರೆ. ಏಕೆಂದರೆ ನನ್ನ ರಾಜಕೀಯ ಜೀವನದಲ್ಲಿ ಸೇಡು ದ್ರೋಹ ಮಾಡಿಲ್ಲ. ಜೆಡಿಎಸ್ ನ ಬಹುತೇಕ ಜನ ಕರೆ ಮಾಡಿ ನೀವೇ ಸ್ಪರ್ಧಿಸಿ ಅಂತಿದ್ದಾರೆ.
ಡಿಕೆ ಶಿವಕುಮಾರ್ ರಾಜ್ಯದ ಡಿಸಿಎಂ ಆಗಿದ್ದು, ಸಿಎಂ ಆಗಲು ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ 136 ಶಾಸಕರಿದ್ದಾರೆ. ಅವರಿಗೆ ಚನ್ನಪಟ್ಟಣ ಯಾಕೆ ಬೇಕು? ಡಿಕೆ ಶಿವಕುಮಾರ್ ಏಕೆ ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ ಹೇಳುತ್ತಾರೆ.ಕ್ಷೇತ್ರದಲ್ಲಿ ನಾನು ಒಬ್ಬ ಇದ್ದೀನಿ ಅಂತ ತೋರಿಸಕ್ಕೆ ಬಂದಿದ್ದಾರೆ. ಆದರೆ ಡಿಸಿಎಂ ಇಲ್ಲಿ ಸೀರಿಯಸ್ ಆಗಿ ಚುನಾವಣೆ ಮಾಡುವುದಿಲ್ಲ.

ಕುಮಾರಸ್ವಾಮಿ ಕೂಡ ಈಗ ನಾನೇ ಅಭ್ಯರ್ಥಿ ಅಂತ ಹೇಳುತ್ತಿದ್ದಾರೆ. ಹಾಗಂತ ಹೆಚ್‍ಡಿ ಕುಮಾರಸ್ವಾಮಿ ಬಂದು ಚುನಾವಣೆಗೆ ನಿಲ್ಲುವುದಿಲ್ಲ ನಾನು ಸ್ಪರ್ಧೆ ಮಾಡಿದ್ರು ಕುಮಾರಸ್ವಾಮಿ ಅಭ್ಯರ್ಥಿ ಅಂದುಕೊಳ್ಳಿ. ಕುಮಾರಸ್ವಾಮಿ ಎರಡು ಸೀಟಿಗೆದ್ದರು ಕೇಂದ್ರ ಮಂತ್ರಿ ಆಗಿದ್ದಾರೆ. ಮತ್ತೆ ಸಿಎಂ ಆಗ್ತೀನಿ ಅಂತಿದ್ದಾರೆ ಅದಕ್ಕೂ ನಾವು ಶುಭ ಕೋರುತ್ತೇವೆ. ಕಾಂಗ್ರೆಸ್ಸಿನ ಹಲವು ಮುಖಂಡರು ನನ್ನ ಪರವಾಗಿ ಕೆಲಸ ಮಾಡುತ್ತಾರೆ ಎಂದು ಸಿಪಿ ಯೋಗೇಶ್ವರ್ ತಿಳಿಸಿದರು.

Leave a Reply

Your email address will not be published. Required fields are marked *