ಒಂಟಿ ಪ್ರಯಾಣಿಕರಿಗೆ ಮೂರ್ಛೆ ಬರುವ ಜ್ಯೂಸ್ ಕುಡಿಸಿ ದರೋಡೆ ಮಾಡುತ್ತಿದ್ದ ಕಳ್ಳಿ ಅಂಧರ್!

ಪರಿವರ್ತನ್ ಪ್ರಭ:

ಪ್ರಯಾಣ ಮಾಡುವಾಗ ಯಾರಾದರು ಕರೆದು ಜ್ಯೂಸ್ ಕುಡಿಸಿದರೆ ತಕ್ಷಣ ಕುಡಿಯುವ ಮುನ್ನ ನೂರು ಬಾರಿ ಯೋಚಿಸಿ. ಯಾಕೆಂದರೆ ಹೀಗೆ ಜ್ಯೂಸ್ ಕುಡಿಸಿ ಪ್ರಯಾಣಿಕರ ಬಳಿ ಇದ್ದ ವಸ್ತುಗಳನ್ನು ಕದಿಯುತ್ತಿದ್ದ ಕಳ್ಳಿಯೊಬ್ಬಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಈ ಖತರ್ನಾಕ್ ಕಳ್ಳಿಕ ಕೈಚಳಕ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.

ಹೌದು… ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಒಂಟಿ ಪ್ರಯಾಣಿಕರನ್ನು ಟಾರ್ಗೇಟ್ ಮಾಡುತ್ತಿದ್ದ ಕಳ್ಳಿಯೊಬ್ಬಳನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಈಕೆಯನ್ನು ಆಂಧ್ರಪ್ರದೇಶ ಮೂಲದ ಲತಾ ಎಂದು ಗುರುತಿಸಲಾಗಿದೆ. ಈಕೆ ಬಿಎಂಟಿಸಿ ಬಸ್‌ನಲ್ಲಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡುತ್ತಿದ್ದ ಒಂಟಿ ಪ್ರಯಾಣಿಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು.

ಬಳಿಕ ಆ ಪ್ರಯಾಣಿಕರನ್ನು ಜ್ಯೂಸಿ ಕುಡಿಸಲು ಕರೆದುಕೊಂಡು ಹೋಗುತ್ತಿದ್ದಳು. ಇಲ್ಲವಾದರೆ ಅವರಿಗೆ ಚಾಕಲೇಟ್‌ ಅನ್ನು ತಿನ್ನಲು ಕೊಡುತ್ತಿದ್ದಳು. ಹೀಗೆ ಈಕೆಯೊಂದಿಗೆ ಜ್ಯೂಸ್ ಹಾಗೂ ಈಕೆ ಕೊಟ್ಟ ಚಾಕಲೆಟ್ ತಿಂದ ತಕ್ಷಣ ಪ್ರಯಾಣಿಕರು ಮೂರ್ಛೆ ಹೋಗುತ್ತಾರೆ. ಆಗ ಈಕೆ ಅವರ ಬಳಿ ಇದ್ದ ಮೊಬೈಲ್, ಹಣ, ಚಿನ್ನಾಭರ ಎಲ್ಲವನ್ನೂ ದೋಚಿ ಪರಾರಿಯಾಗುತ್ತಿದ್ದಳು.

ಈ ಬಗ್ಗೆ ಹಲವಾರು ಪ್ರಯಾಣಿಕರಿಂದ ಬ್ಯಾಟರಾಯನ ಪೊಲೀಸ್ ಠಾಣೆಯಲ್ಲಿ ದೂರುಗಳು ಬಂದಿದ್ದವು. ಇದರ ಆಧಾರದ ಮೇಲೆ ಪೊಲೀಸರು ಕಳ್ಳಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಕಳ್ಳಿ ಬಂಧನದ ಬಳಿಕ ಆತ್ಮಹತ್ಯೆಯ ಡ್ರಾಮಾ ಆಡಿದ್ದಾಳೆ. ತನ್ನ ಬಳಿ ಇದ್ದ ಚಾಕೊಲೆಟ್ ಅನ್ನು ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಪೊಲೀಸರು ತಕ್ಷಣ ಈಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬ್ಯಾಟರಾಯನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಪೊಲೀಸರು ನಿರಂತರ ಜಾಗೃತಿ ಮೂಡಿಸಿದರೂ ಕೆಲವರು ಎಚ್ಚರ ವಹಿಸುವುದಿಲ್ಲ. ಮಾಲೀಕರೋಬ್ಬರ ನಿರ್ಲಕ್ಷ್ಯತನವನ್ನೇ ಬಂಡವಾಳ ಮಾಡಿಕೊಂಡ ಖದೀಮನೊಬ್ಬ ಮನೆ ಮುಂದಿಟ್ಟಿದ್ದ ಕೀ ಬಳಸಿಕೊಂಡು ಕಳ್ಳತನ ಮಾಡಿದ್ದಾನೆ. ಇದೀಗ ವೈಟ್ ಫೀಲ್ಡ್ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು.. ಪ್ರದೀಪ್ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಹತ್ತು ಲಕ್ಷ ರೂಪಾಯಿ ಮೌಲ್ಯದ 152 ಗ್ರಾಂ ಚಿನ್ನ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಾಲಾಗಿದೆ. ಆರೋಪಿಯು ಕಂಪನಿಯೊಂದರ ಡೆಲಿವರಿ ಬಾಯ್ ಆಗಿ ಹಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದನು. ಡೆಲಿವರಿ ಮಾಡಲು ಮನೆಗಳಿಗೆ ಹೋದಾಗ ಮಾಲಿಕರು ಮನೆ ಮುಂದೆ ಕೀ ಇಡುವ ಬಗ್ಗೆ ಅರಿತುಕೊಂಡಿದ್ದ ಎಂದು ಪೊಲಿಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 27ರಮದು ಜ್ಯೂಸ್ ಅಂಗಡಿಗೆ ತೆರಳಲು ಮಾಲೀಕರು ಮನೆಯನ್ನು ಲಾಕ್ ಮಾಡಿ ಕೀಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಮನೆಯ ಹೊರಗಡೆ ಇಟ್ಟು ಹೋಗಿದ್ದರು. ಇದನ್ನು ಅರಿತ ಪ್ರದೀಪ್ ಬೀಗ ತೆಗೆದು ಮನೆಯಲ್ಲಿ ಇದ್ದ ಎಮಟು ಗ್ರಾಂ ಚಿನ್ನ, ಹತ್ತು ಸಾವಿರ ನಗದು ದೋಚಿ ಪರಾರಿಯಾಗಿದ್ದನು. ಮನೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಲಾಗಿದೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *